¡Sorpréndeme!

ಸಿದ್ದು, ರಾಹುಲ್ ನಿದ್ದೆ ಮಾಡೋ 'ಜೋಡಿ ಎತ್ತುಗಳು' : ಆರ್ ಅಶೋಕ್ ಲೇವಡಿ | Oneindia Kannada

2017-12-11 512 Dailymotion

ಬೆಂಗಳೂರು, ಡಿ 11: ನಮ್ಮ ಹತ್ತಿರ ಎರಡು ಜೋಡಿ ಎತ್ತುಗಳಿವೆ, ಒಂದು ನರೇಂದ್ರ ಮೋದಿ ಮತ್ತು ಯಡಿಯೂರಪ್ಪ. ಕಾಂಗ್ರೆಸ್ ಪಕ್ಷದಲ್ಲೂ ಜೋಡಿ ಎತ್ತುಗಳಿವೆ, ಆದರೆ ಅವು ನಿದ್ದೆ ಮಾಡುವ ಜೋಡಿ ಎತ್ತುಗಳು ಎಂದು ಮಾಜಿ ಡಿಸಿಎಂ ಮತ್ತು ಬಿಜೆಪಿ ಮುಖಂಡ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ಪರಿವರ್ತನಾಯಾತ್ರೆಯ 39ನೆಯ ದಿನವಾದ ಭಾನುವಾರ (ಡಿ 10) ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅಶೋಕ್, ನಮ್ಮ ಎತ್ತುಗಳಿಗೂ ಕಾಂಗ್ರೆಸ್ ಎತ್ತುಗಳಿಗೂ ಇರುವ ವ್ಯತ್ಯಾಸ ಏನಂದರೆ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಿದ್ದೆ ಮಾಡುವ ಜೋಡಿ ಎತ್ತುಗಳು ಎಂದು ವ್ಯಂಗ್ಯವಾಡಿದ್ದಾರೆ. ಒಬ್ಬರು ಪಾಪು ರಾಹುಲ್,ಇನ್ನೊಬ್ಬರು ನಿದ್ದೆ ಸಿದ್ದರಾಮಯ್ಯ ಎಂದು ಹೇಳಿರುವ ಅಶೋಕ್, ಗುಜರಾತ್ ಚುನಾವಣೆಯ ನಂತರ ರಾಹುಲ್ ಗಾಂಧಿ ಮತ್ತು ಸಿದ್ದಣ್ಣ ಗಂಟುಮೂಟೆ ಕಟ್ಟೋದು ನಿಶ್ಚಿತ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ. ಪರಿವರ್ತನಾಯಾತ್ರೆಯ 39ನೆಯ ದಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಬೃಹತ್ ಯಾತ್ರೆ ನಡೆಸಿತು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಯಡಿಯೂರಪ್ಪ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ವಿರುದ್ದ ಹರಿಹಾಯ್ದರು. ನಮ್ಮ ಸರಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿ ಏಳು ಲಕ್ಷ ಉದ್ಯೋಗ ಸೃಷ್ಟಿಸಲಾಗಿತ್ತು.
BJPs Parivartana Yatra will transform Karnataka State, BJP Leader R Ashok during 39th day of Yatre in Bengaluru South on Sunday (Dec 10).